ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಗೆ 3.8 ಲಕ್ಷ ರೂ. ವಂಚನೆ

ಕುಂದಾಪುರ : ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 3.8 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರವೀಣ ಕುಮಾರ್ ವಂಚನೆಗೆ ಒಳಗಾದವರು.

ಇವರ ಮೊಬೈಲ್‌ಗೆ ಕಾಲ್ ಮಾಡಿದ ಅಪರಿಚಿತ ವ್ಯಕ್ತಿ 2 ಗಂಟೆಯೊಳಗೆ ನಿಮ್ಮ ಮೊಬೈಲ್ ಸ್ಥಗಿತಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ 9 ಅನ್ನು ಒತ್ತಲು ತಿಳಿಸಿದ್ದು, ಬಳಿಕ ಬೇರೆಯವರಿಗೆ ಸಂಪರ್ಕವಾಗಿತ್ತು. ನಿಮ್ಮ ಆಧಾರ್ ಕಾರ್ಡ್ ಫ್ರಾಡ್ ಆಗಿದೆ ಎಂದು ಹೇಳಿ ಸಿಬಿಐ ಡಿಪಿ ಹಾಕಿದ ಸಂಖ್ಯೆಯಿಂದ ಕರೆ ಮಾಡಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣ ನಿಮ್ಮ ಮೇಲಿದೆ ಎಂದು ಹೇಳಿ ದಾಖಲೆಗಳನ್ನು ಪರಿಶೀಲಿಸಲು ಆಧಾರ್ ಕಾರ್ಡ್, ಪಾಸ್ ಪುಸ್ತಕ, ಪ್ಯಾನ್ ಕಾರ್ಡ್ ತೋರಿಸಲು ಹೇಳಿದರು. ಸ್ವಲ್ಪ ಹೊತ್ತಿನ ಅನಂತರ 3.80 ಲ.ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಹಾಕಿಸಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ