ಪಾರ್ಟ್‌ಟೈಮ್ ಜಾಬ್ ಆಫರ್‌‌ ನೀಡಿ ಬರೋಬ್ಬರಿ 28.18ಲಕ್ಷ ರೂ. ವಂಚನೆ – ಇಬ್ಬರು ಅರೆಸ್ಟ್

ಮಂಗಳೂರು : ಪಾರ್ಟ್‌ಟೈಮ್ ಜಾಬ್ ಆಫರ್ ನೀಡಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 28,18,065 ಲಕ್ಷ ರೂ‌. ಹಣ ವಂಚಿಸಿರುವ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ನಿವಾದಿ ಅಮೀರ್ ಸುಹೇಲ್ ಮತ್ತು ಜಮ್ಮು ಕಾಶ್ಮೀರ ರಾಜ್ಯದ ಅನಂತನಾಗ ಜಿಲ್ಲೆಯ ಸುಹೇಲ್ ಅಹ್ಮದ್ ವಾನಿ ಬಂಧಿತ ಆರೋಪಿಗಳು.

2024ರ ಜುಲೈ 7ರಂದು ಪಾರ್ಟ್‌ಟೈಮ್ ಜಾಬ್ ಬಗ್ಗೆ ಸಂತ್ರಸ್ತ ವ್ಯಕ್ತಿಯ ವಾಟ್ಸ್‌ಆ್ಯಪ್‌ಗೆ ಮೆಸೇಜ್ ಬಂದಿತ್ತು. ಅದರಲ್ಲಿನ ಟೆಲಿಗ್ರಾಮ್ Appನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ ಪಿರ್ಯಾದಿದಾರರು ಟೆಲಿಗ್ರಾಮ್ Appಅನ್ನು ತೆರೆದು ಜಾಬ್ ವಿವರ ಕೇಳಿದ್ದರು. ಆಗ ಅವರಿಗೊಂದು ವೀಡಿಯೋ ಕಳುಹಿಸಿ ಅದನ್ನು ನೋಡಿ ಸ್ಟ್ರೀನ್ ಶಾಟ್ ಕಳುಹಿಸಲು ಹೇಳಿದ್ದಾರೆ. ಪಿರ್ಯಾದಿದಾರರು ಅದರಂತೆ ಸ್ಕಿನ್‌ಶಾಟ್ ಕಳುಹಿಸಿದ್ದಾರೆ ‌ತಕ್ಷಣ ಅವರ ಬ್ಯಾಂಕ್ ಖಾತೆಗೆ 130ರೂ. ಜಮಾ ಆಗಿದೆ.

ಬಳಿಕ ಪಿರ್ಯಾದಿದಾರರು ಹಾಕಿರುವ ವೀಡಿಯೋ ತಪ್ಪಾಗಿದೆ ಎಂದು ಹೇಳಿ ಅದನ್ನು ಸರಿ ಮಾಡಲು ಟೆಲಿಗ್ರಾಮ್ ಲಿಂಕ್ ಅನ್ನು ಕಳುಹಿಸಿದ್ದಾರೆ. ಆ ಲಿಂಕ್‌ನ ಓಪನ್ ಮಾಡಿದಾಗ ಆರೋಪಿಗಳು 1000 ರೂ. ಮೊತ್ತವನ್ನು ಹಾಕಲು ಹೇಳಿದ್ದಾರೆ. ಅದರಂತೆ ಪಿರ್ಯಾದಿದಾರರು ಹಣ ಹಾಕಿದ್ದಾರೆ. ಬಳಿಕ ವಂಚಕರು ಅವರಿಗೆ ಅಧಿಕ ಮೊತ್ತದ ಲಾಭಾಂಶದ ಆಮಿಷವೊಡ್ಡಿ ಸಂತ್ರಸ್ತ ವ್ಯಕ್ತಿ ತಮ್ಮ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ವಿವಿಧ ಖಾತೆಗಳಿಗೆ ಒಟ್ಟು 28,18,065 ರೂ. ಹಣವನ್ನು ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯಿದೆಯಂತೆ ದೂರು ದಾಖಲಾಗಿರುತ್ತದೆ.

ಈಗಾಗಲೇ ಈ ಪ್ರಕರಣದಲ್ಲಿ ಬೆಂಗಳೂರು ಹಾಗೂ ಮೈಸೂರು ಮೂಲದ 5 ಆರೋಪಿಗಳನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿರುತ್ತದೆ. ಈ ಆರೋಪಿಗಳ ವಿಚಾರಣೆಯಲ್ಲಿ ಇತರೆ ಆರೋಪಿಗಳ ಮಾಹಿತಿ ದೊರಕಿದೆ. ಅವರಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಜಮ್ಮು ಕಾಶ್ಮೀರ್ ರಾಜ್ಯದ ಕುಲಮ್ ಬಳಿ ದಸ್ತಗಿರಿ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ.

ಸುಹೇಲ್ ಅಹ್ಮದ್ ವಾನಿ ಮೂಲತಃ ಜಮ್ಮು ಕಾಶ್ಮೀರ ರಾಜ್ಯದವನಾಗಿದ್ದು, ಈತನಿಗೆ ಬೆಂಗಳೂರಿನಲ್ಲಿ ಅಮೀರ್ ಸುಹೇಲ್ ಪರಿಚಯವಾಗಿದ್ದಾನೆ‌. ಇಬ್ಬರೂ ಆರೋಪಿಗಳು ಹಲವಾರು ಬ್ಯಾಂಕ್‌ಗಳಲ್ಲಿ ಬೇರೆಯವರ ಹೆಸರಿನಲ್ಲಿ ಹಾಗೂ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಮಾಡಿಸಿಕೊಂಡಿದ್ದಾರೆ. ಇದೇ ರೀತಿ ಬೇರೆ ಬೇರೆ ಬ್ಯಾಂಕ್ ಆಕೌಂಟ್ ಮಾಡಿಸಿಕೊಟ್ಟು ದಿನಕ್ಕೆ ಮೂರರಿಂದ ಐದು ಸಾವಿರ ರೂ. ಹಣಗಳಿಸುವ ಉದ್ದೇಶದಿಂದ ಬ್ಯಾಂಕ್ ಖಾತೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ