19 ಗೋವು ಅಕ್ರಮ ಸಾಗಾಟ ಪ್ರಕರಣ : ಐವರು ಪೊಲೀಸ್ ವಶಕ್ಕೆ

ಮಂಗಳೂರು : ಮೂಡುಬಿದಿರೆ ಕಡೆಯಿಂದ ಕೈಕಂಬ ಕಡೆಗೆ ಟೆಂಪೋದಲ್ಲಿ ಮಾ.28ರಂದು 19 ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದನ್ನು ಸೂರಲ್ಪಾಡಿಯಲ್ಲಿ ಬಜಪೆ ಪೊಲೀಸರು ಪತ್ತೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದುಗನಬೆಟ್ಟು ಹೌಸಿನ ಮೊಹಮ್ಮದ್ ತೌಸೀಫ್ (26), 62ನೇ ತೋಕೂರು ಗ್ರಾಮದ ನಡುಮನೆಯ ಆರಾಫತ್ ಅಲಿ (36), ಶಾಂತಿಗುಡ್ಡೆ ಹೌಸ್‌ನ ಮೊಹಮ್ಮದ್ ಅಫ್ರಿದ್ ಯಾನೆ ಅಪ್ಪಿ (27), ಮೂಡುಬಿದಿರೆ ಕೋಟೆಬಾಗಿಲಿನ ಅಬ್ದುಲ್ ನಜೀರ್ (31) ಹಾಗೂ ಬೆಳ್ತಂಗಡಿ ತಾಲೂಕಿನ ಕಾಶೀಪಟ್ಟ ಪೆರಂತಡ್ಕ ಫಾರೀಸ್ ಸಲ್ಮಾನ (26) ಎಂದು ಗುರುತಿಸಲಾಗಿದೆ.

ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

Related posts

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ