16 ಲಕ್ಷ ರೂ. ಮೌಲ್ಯದ ಗೇರುಬೀಜ ಖರೀದಿಸಿ ವಂಚನೆ

ಕುಂದಾಪುರ : ಗುಲ್ವಾಡಿ ಗ್ರಾಮದ ಗುಲ್ವಾಡಿ ಟ್ರೇಡರ್ಸ್‌ ಗೇರುಬೀಜ ಸಂಸ್ಕರಣೆಯ ಘಟಕದಿಂದ ಮುಂಬಯಿಯ ಸಂಸ್ಥೆಯೊಂದು ರೂ.16 ಲಕ್ಷ ಗೇರುಬೀಜ ಖರೀದಿಸಿ ಹಣ ನೀಡದೆ ವಂಚಿಸಿರುವ ಘಟನೆ ನಡೆದಿದೆ.

ಗುಲ್ವಾಡಿ ಗ್ರಾಮದ ಗುಲ್ವಾಡಿ ಟ್ರೇಡರ್ಸ್‌ ಹೆಸರಿನ ಗೇರುಬೀಜ ಸಂಸ್ಕರಣೆಯ ಘಟಕ ನಡೆಸಿಕೊಂಡಿರುವ ಅಸ್ಮಾ (33) ಅವರಿಗೆ ಮಹಾವೀರ ಟ್ರೇಡಿಂಗ್‌ ಕಂಪೆನಿ ಮುಂಬಯಿಯ ಮಾಲಕಿ ಭಾರತಿ, ಆಕೆಯ ಪತಿ ನೀಲೇಶ್‌ ನಿರಂಜನ್‌, ಅವರ ಬಂಧು ಪಿಯುಷ್‌ ಗೋಗ್ರಿ ಅವರು ವಂಚಿಸಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿದೆ.

ನಿತೇಶ್‌ ಕೆ. ಟಕ್ಕರ್‌ ಎಂಬ ದಲ್ಲಾಳಿ ಮುಖಾಂತರ ಆರೋಪಿಗಳ ಪರಿಚಯವಾಗಿ 2 ವರ್ಷಗಳಿಂದ ಆರೋಪಿಗಳು ಗೇರುಬೀಜ ಖರೀದಿಸುವ ವ್ಯವಹಾರ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಆರೋಪಿಗಳು ರೂ.16 ಲಕ್ಷ ಮೌಲ್ಯದ ಗೇರು ಬೀಜ ಖರೀದಿಸಿ 15 ದಿನಗಳಲ್ಲಿ ಹಣ ಪಾವತಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ

ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ತಾಲೂಕು ಸರಕಾರಿ ಆಸ್ಪತ್ರೆ,‌‌ ಆರೋಗ್ಯ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ