ಪಿಎಂ ವಿಶ್ವಕರ್ಮ ಯೋಜನೆಯಡಿ ಕೌಶಲ್ಯ ವೃದ್ಧಿ ತರಬೇತಿಗೆ 13,485 ಅರ್ಜಿ : ಉಡುಪಿ ಡಿಸಿ

ಉಡುಪಿ : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 18 ಚಟುವಟಿಕೆಗಳಲ್ಲಿ ವೃತ್ತಿ ಕೌಶಲ್ಯ ವೃದ್ಧಿ ತರಬೇತಿಗೆ 50,000 ಮಂದಿ ನೋಂದಣಿ ಗುರಿ ಹೊಂದಲಾಗಿದ್ದು, ಈ ಸಂಬಂಧ ಕೇವಲ 13,485 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಉಡುಪಿ ಕರಾವಳಿ ಬೈಪಾಸ್ ಬಳಿಯಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 30 ಮಂದಿಯ ಮೊದಲ ತಂಡಕ್ಕೆ ಚಿನ್ನ, ಬೆಳ್ಳಿ ಆಭರಣ ತಯಾರಿಕೆಯ ಕೌಶಲ್ಯ ವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವೃತ್ತಿ ನಿರತರಿಗೆ ಪ್ರಮಾಣ ಪತ್ರ ನೀಡಿ, ವೃತ್ತಿಯನ್ನು ಉದ್ದಿಮೆಯಾಗಿ ಪರಿವರ್ತನೆ, ವಿಸ್ತರಣೆಗೆ ಪಿಎಂ ವಿಶ್ವಕರ್ಮ ಯೋಜನೆಯಡಿ ಒಂದು ಲಕ್ಷ ರೂ. ಹಣಕಾಸು ನೆರವು ನೀಡಲಾಗುವುದು. ಮರುಪಾವತಿಸಿದರೆ ದುಪ್ಪಟ್ಟು ಸಾಲ ಸಿಗಲಿದೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಲಾಭ ಪಡೆಯಬೇಕು. ಕಾಲೇಜಿಗೆ ತೆರಳುವ ಹಾಸ್ಟೆಲ್ ಹೆಣ್ಣು ಮಕ್ಕಳಿಗೆ ಸಂಜೆ ಬಳಿಕ ಎರಡು ಗಂಟೆಗಳ ಕೌಶಲ್ಯ ತರಬೇತಿ ನೀಡಿದ್ದು ವೃತ್ತಿ ನೈಪುಣ್ಯದ ಅನುಕೂಲಕ್ಕಾಗಿ ಮತ್ತಷ್ಟು ಮಕ್ಕಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.

ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್ ಮಾತನಾಡಿದರು. ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ ಎಕ್ಸ್‌ಪರ್ಟ್ ಪ್ರೆಮೋಷನ್ ಕೌನ್ಸಿಲ್‌ ಚೀಫ್ ಆಫರೇಟಿಂಗ್ ಆಫೀಸರ್ ಸಿದ್ಧಾರ್ಥ ಸಿಂಘಾ ಸ್ವಾಗತಿಸಿದರು. ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !