ವನ್ಯಜೀವಿ ಛಾಯಾಗ್ರಹಣದಲ್ಲಿ 13 ವರ್ಷದ ಪೋರ ವಿದ್ಯುನ್ ಆರ್. ಹೆಬ್ಬಾರ್ ಸಾಧನೆ

ಉಡುಪಿ : ವನ್ಯಜೀವಿ ಛಾಯಾಗ್ರಹಣ ಎಂಬುದು ದೊಡ್ಡ ವರಿಗೆ ಕಷ್ಟದ ಕೆಲಸ ಎಂದೆನಿಸಿರುವಾಗ, ಹತ್ತು ವರ್ಷದವನಾಗಿದ್ದಾಗ ವಿದ್ಯುನ್ ಆರ್. ಹೆಬ್ಬಾರ್ ವನ್ಯಜೀವಿ ಛಾಯಾಗ್ರಹಣದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾನೆ.

2021 ರ “ವೈಲ್ಡ್ ಲೈಫ್ ಫೋಟೋಗ್ರಾಫರ್ ಆಫ್ ದ ಇಯರ್” ಎಂಬ ಅಂತರ್ ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ‌ಯಲ್ಲಿ‌, 18ದ ವರ್ಷ ಒಳಗಿನ ವಿಭಾಗದಲ್ಲಿ “ಗ್ರಾಂಡ್ ಟೈಟಲ್” ಪ್ರಶಸ್ತಿಯನ್ನು ಗೆದ್ದಿದ್ದನು. ಈ ಪ್ರಶಸ್ತಿಯನ್ನು ವೈಲ್ಡ್ ಲೈಫ್ ಫೋಟೋಗ್ರಾಫಿಯ “‌ಓಸ್ಕರ್ಸ್” ಎಂದೇ ಕರೆಯಲಾಗುತ್ತದೆ.

ಕೊರೋನಾದ ಕಾರಣದಿಂದಾಗಿ ಆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆನ್‌ಲೈನ್ ಮುಖಾಂತರ ಮಾಡಲಾಗಿತ್ತು. ಈ ವರ್ಷ ಆ ಪ್ರಶಸ್ತಿಯ 60ನೇ ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನ ದೊರಕಿದ್ದು, ವಿದ್ಯುನ್ ಅಕ್ಟೋಬರ್ 8ರಂದು ನಡೆಯುವ ಕಾರ್ಯಕ್ರಮಕ್ಕೆ ಲಂಡನಿಗೆ ತೆರಳಲಿದ್ದಾನೆ.

13 ವರ್ಷದ ವಿದ್ಯುನ್ ಆರ್. ಹೆಬ್ಬಾರ್ ಹುಳಿಮಾವಿನ ಬಿಜಿಎಸ್ ಎನ್ ಪಿ ಎಸ್ ಶಾಲೆಯ ವಿದ್ಯಾರ್ಥಿ. ರವಿಪ್ರಕಾಶ್ ಮತ್ತು ನಮಿತಾ ದಂಪತಿಯ ಪುತ್ರನಾದ ಅವನು, ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ವಿದ್ಯುನ್‌ಗೆ ಚಿಕ್ಕಂದಿನಿಂದಲೂ ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿಯಿದ್ದು, ಅದನ್ನು ಪೋಷಕರು ಪೋಷಿಸಿದ ಕಾರಣಕ್ಕೆ ಇಂದು ಹೆಮ್ಮರವಾಗಿ ಬೆಳೆದಿದೆ. ಈ ಪ್ರಶಸ್ತಿಯ ಮೂಲಕ ತನ್ನ ಛಾಯಾಗ್ರಹಣ ಕೌಶಲವನ್ನು ಮೆರೆದಿದ್ದಾನೆ. 3 ವರ್ಷದವನಾಗಿದ್ದಾಗಲೇ ತಂದೆಯ ಡಿಎಸ್‌‌ಎಲ್‌ಆರ್ ಕ್ಯಾಮೆರಾ ಬಳಸಿ ಛಾಯಾಗ್ರಹಣ ಮಾಡುವ ಕಲೆಯನ್ನು ವಿದ್ಯುನ್ ಕಲಿತುಕೊಂಡ. ಅವರ ತಂದೆ ಕೂಡ ಛಾಯಾಗ್ರಹಕರಾಗಿದ್ದು, 2014‌ರಲ್ಲಿ ಅವರೂ ಇದೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅವರಿಂದ ಆ ಕಲೆ ರಕ್ತಗತವಾಗಿಯೇ ಬಂದಿದೆ ಎನ್ನಬಹುದು. ಬಾಲಕ ಯಕ್ಷಗಾನ ಕಲಾವಿದ ಹರಿದಾಸ ಮಲ್ಪೆ ರಾಮದಾಸ ಸಾಮಗ ಹಾಗು ಶ್ರೀಮತಿ ನಾಗರತ್ನ ಸಾಮಗ ದಂಪತಿಗಳ ಮರಿಮಗ, ಸಾಹಿತಿ ಅಂಬುಜರವರ ಮೊಮ್ಮಗ.

Related posts

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ….

Much Awaited Tulu movie Gajanana Cricketers set for worldwide release in January 2026

ಉಡುಪಿ ಪತ್ರಕರ್ತರ, ವೈದ್ಯಕೀಯ ಸಂಘದ ಸೂಚನಾ ಫಲಕ ಅನಾವರಣ