ಶ್ರೀರಾಮಸೇನೆಯಿಂದ ವಿವಾಹ ನೋಂದಣಾಧಿಕಾರಿಯವರಿಗೆ ಮನವಿ

ಉಡುಪಿ : ಕರ್ನಾಟಕದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಲವ್ ಜಿಹಾದ್ ವಿರುದ್ಧ ಹಿಂದೂ ಸಹೋದರಿಯರ ರಕ್ಷಣೆಗಾಗಿ ಶ್ರೀರಾಮ ಸೇನೆಯು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ಸಂತ್ರಸ್ತರ ಧ್ವನಿಯಾಗಿ ಕಾರ್ಯ ನಿರ್ವಹಿಸುವ ” ಸಹಾಯ ವಾಣಿ” ಉದ್ಘಾಟನೆ ಇದೇ ಮೇ 29 ರಂದು ಹುಬ್ಬಳ್ಳಿ ಕೇಂದ್ರೀಕೃತವಾಗಿ ರಾಜ್ಯದ 6 ಕಡೆಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಇದರ ಪೂರ್ವಭಾವಿಯಾಗಿ, ಅಂತರ ಧರ್ಮದ ವಿವಾಹವು ಕೋಮು ಸ್ವರೂಪ ಪಡೆಯುತ್ತಿದ್ದು ಗಲಭೆ, ಸಾಮರಸ್ಯ ಹಾಳು ಮಾಡುತ್ತಿರುವ ಘಟನೆಗಳು ರಾಜ್ಯದಲ್ಲಿ ಜರುಗುತ್ತಿವೆ. ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲೀಸದೇ, ನೋಟೀಸ್ ಬೋರ್ಡ್‌ಗೆ ಪ್ರತಿ ಹಾಕದೇ ವಿವಾಹ ಮಾಡುವ ಬಗ್ಗೆ ದೂರುಗಳಿದ್ದು ಇದರ ಸಲುವಾಗಿ ವಿವಾಹ ನೋಂದಣಿ ಕಚೇರಿಯಲ್ಲಿ ಮತಾಂತರ ತಡೆ -2022 ಆಕ್ಟ್ ಸೇರಿದಂತೆ ಯಾವುದೇ ಕಾನೂನಿನ ಲೋಪಗಳು ಜರುಗದಂತೆ ಜಾಗ್ರತೆ ವಹಿಸಿ ಕೋಮು ಸೂಕ್ಷ್ಮ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಆಗ್ರಹಿಸಿ ಜಿಲ್ಲಾ ಹಿರಿಯ ವಿವಾಹ ನೋಂದಣಾಧಿಕಾರಿ ಶ್ರೀ ಪಣೀಂದ್ರ ರವರಿಗೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಜಿಲ್ಲಾ ವಕ್ತಾರ ಶರತ್ ಮಣಿಪಾಲ, ಪ್ರ. ಕಾರ್ಯದರ್ಶಿ ಸುಧರ್ಶನ್ ಕಪ್ಪೆಟ್ಟು, ಕಾರ್ಯದರ್ಶಿ ವಿಕ್ರಂ ವಿ, ಜಿಲ್ಲಾ ಸಂಪರ್ಕ ಪ್ರಮುಖ್ ಸುಜಿತ್ ನಿಟ್ಟೂರು, ನಗರ ಅಧ್ಯಕ್ಷ ಸುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related posts

ಬಾವಿಗೆ ಬಿದ್ದು ಕೃಷಿಕ ಮೃತ್ಯು

ಕೆಎಂಸಿ ಮಣಿಪಾಲದಲ್ಲಿನ ವಂಧ್ಯತ್ವ ಸಂರಕ್ಷಣಾ ಕೇಂದ್ರವು ಯಶಸ್ಸಿನ ಒಂದು ದಶಕವನ್ನು ಆಚರಿಸುತ್ತದೆ.

ಬೀಚ್ ಸಮೀಪ ನಿಷೇಧಿತ ಎಂಡಿಎಂಎ ಪೌಡರ್‌ ಮಾರಾಟಕ್ಕೆ ಯತ್ನಿಸಿದ ನಾಲ್ಕು ಮಂದಿ ಪೊಲೀಸ್ ವಶಕ್ಕೆ