ಪಡುಕೆರೆಯಲ್ಲಿ ಕಡಲು ಪ್ರಕ್ಷುಬ್ಧ : ತೀವ್ರಗೊಂಡ ಕಡಲ್ಕೊರೆತ

ಮಲ್ಪೆ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಬ್ಬರದ ಅಲೆಗಳಿಂದ ಪಡುಕೆರೆ ಸಮೀಪದ ಶಾಂತಿನಗರದ ಕಿನಾರ ಫ್ರೆಂಡ್ಸ್ ಬಳಿ ಕಡಲುಕೊರೆತ ಉಂಟಾಗಿದೆ.

ಅದೇ ರೀತಿ ಕೆಲವೇ ದೂರದಲ್ಲಿರುವ ವೀರಾಂಜನೇಯ ಪೂಜಾ ಮಂದಿರದ ಬಳಿ ಕೊರೆತ ಕಾಣಿಸಿಕೊಂಡಿದೆ. ಈ ಹಿಂದೆ ಇಲ್ಲಿ ತಡೆಗೋಡೆಯಾಗಿ ಕಡಲ ತೀರದಲ್ಲಿ ಹಾಕಲಾದ ಮಣ್ಣಿನ ಚೀಲಗಳು ಸಮುದ್ರ ಪಾಲಾಗಿವೆ.ಇನ್ನು ಈ ಭಾಗದಲ್ಲಿ ಕೆಲವು ಮನೆಗಳು ಮತ್ತು ತೆಂಗಿನ ಮರಗಳು ಅಪಾಯದಲ್ಲಿವೆ. ಕೆಲವು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿಯಿಂದಾಗಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಈ ಭಾಗದ ಜನರು ಭಯಭೀತರಾಗಿದ್ದಾರೆ.

Related posts

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ….

Much Awaited Tulu movie Gajanana Cricketers set for worldwide release in January 2026

ಉಡುಪಿ ಪತ್ರಕರ್ತರ, ವೈದ್ಯಕೀಯ ಸಂಘದ ಸೂಚನಾ ಫಲಕ ಅನಾವರಣ