ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ – ಇಬ್ಬರು ಅರೆಸ್ಟ್, ಉಳಿದವರಿಗಾಗಿ ಶೋಧ

ಉಡುಪಿ : ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್‌ ವಾ‌ರ್ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಅದರ ವಿಡಿಯೋ ವೈರಲ್ ಆಗುತ್ತಿದೆ. ಮೇ 18ರಂದು ರಾತ್ರಿ ಎರಡು ತಂಡಗಳ ನಡುವೆ ನಡು ರಸ್ತೆಯಲ್ಲೇ ಹೊಡೆದಾಟ ನಡೆದಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಿ ಎರಡೂ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಬಳಿಕ ಎರಡು ತಂಡಗಳ ನಡುವೆ ಫೈಟ್ ನಡೆದಿದೆ. ಈ ವೇಳೆ ನಡುರಸ್ತೆಯಲ್ಲೇ ತಂಡವೊಂದು ತಲವಾರು ಹಿಡಿದು ಹೊಡೆದಾಟ ನಡೆಸಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಶಿಕ್ ಮತ್ತು ರಕೀಬ್ ಎಂಬಿಬ್ಬರು ಆರೋಪಿಗಳ ಬಂಧನವಾಗಿದ್ದು ಇವರಿಬ್ಬರು ಗರುಡ ಗ್ಯಾಂಗ್‌ನವರು ಎಂದು ಎಸ್ಪಿ ತಿಳಿಸಿದ್ದಾರೆ. ಎರಡು ಸ್ವಿಫ್ಟ್ ಕಾರು, ಎರಡು ಬೈಕ್‌, ಒಂದು ತಲವಾರು ಒಂದು ಡ್ರ್ಯಾಗರ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Related posts

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಬಾವಿಗೆ ಬಿದ್ದು ಕೃಷಿಕ ಮೃತ್ಯು