ಡಾ.ಶೈಲೇಶ್‌ ಕುಮಾರ್ ಕವನ ಸಂಕಲನ ಕಡೆಂಗೋಡ್ಲು ಕಾವ್ಯಪ್ರಶಸ್ತಿ-24ಕ್ಕೆ ಆಯ್ಕೆ

ಉಡುಪಿ : ಡಾ. ಶೈಲೇಶ್ ಕುಮಾ‌ರ್ ಶಿವಕುಮಾ‌ರ್ ಅವರ ‘ಅನುವಾದವೆಂಬೋ ಸಂಬಂಧ’ ಕವನ ಸಂಕಲನ 2024ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಮಣಿಪಾಲ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕ‌ವನ್ನೊಳಗೊಂಡಿರುತ್ತದೆ.

ಪ್ರಶಸ್ತಿ ಆಯ್ಕೆ ಸಮಿತಿಯು ಡಾ.ಶೈಲೇಶ್ ಕುಮಾರ್ ಶಿವಕುಮಾ‌ರ್ ಅವರ ‘ಅನುವಾದವೆಂಬೋ ಸಂಬಂಧ’ ಅಪ್ರಕಟಿತ ಕವನ ಸಂಕಲನವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕವಿ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ಪತ್ರಿಕೋದ್ಯಮಿ ಹೀಗೆ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರಾದ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಡಾ.ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್‌ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಬಾವಿಗೆ ಬಿದ್ದು ಕೃಷಿಕ ಮೃತ್ಯು

ಕೆಎಂಸಿ ಮಣಿಪಾಲದಲ್ಲಿನ ವಂಧ್ಯತ್ವ ಸಂರಕ್ಷಣಾ ಕೇಂದ್ರವು ಯಶಸ್ಸಿನ ಒಂದು ದಶಕವನ್ನು ಆಚರಿಸುತ್ತದೆ.