ಕೊಳಚೆ ನೀರು ಮರುಬಳಕೆಗೆ ಯೋಜನೆ ರೂಪಿಸಿ : ಶಾಸಕ ಭರತ್ ಶೆಟ್ಟಿ

ಮಂಗಳೂರು : ನಾಗ್ಪುರ ಮಾದರಿಯಲ್ಲೇ ಮಂಗಳೂರಿನಲ್ಲೂ ಕೊಳಚೆ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಮರುಬಳಕೆಗೆ ಸಿಗುವಂತೆ ಯೋಜನೆ ರೂಪಿಸಬೇಕು ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದರು.

ಮನಪಾ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ನಾಗ್ಪುರದಲ್ಲಿ 8 ವರ್ಷದ ಹಿಂದೆ ಆರಂಭಗೊಂಡ ಕೊಳಚೆ ನೀರು ಶುದ್ಧೀಕರಣ ಯೋಜನೆ ಅಲ್ಲಿ ಯಶಸ್ವಿಯಾಗಿದೆ. ರಾಜ್ಯ ರಾಜಧಾನಿಯಲ್ಲೂ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಶುದ್ಧೀಕರಿಸಿದ ಈ ನೀರನ್ನು ಕಟ್ಟಡ ಕಾಮಗಾರಿ, ಕೈಗಾರಿಕೆಗಳಿಗೆ ಬಳಕೆ ಮಾಡಬಹುದಾಗಿದೆ. ಮಹಾನಗರಪಾಲಿಕೆ ಈ ಯೋಜನೆಯನ್ನು ಕೈಗೆತ್ತಿಕೊಂಡರೆ ಎಂಆರ್‌ಪಿಎಲ್ ತನ್ನ ಕೈಗಾರಿಕೆಗೆ ಬಳಸಿಕೊಳ್ಳಲು ತಯಾರಿದೆ. ನಗರದಲ್ಲಿರುವ ವಸತಿ ಸಮುಚ್ಚಯದವರು ಎಸ್‌ಟಿಪಿಗಳನ್ನು ಆರಂಭಿಸಿ ಅದರ ನೀರನ್ನು ತೋಡು, ನದಿಗಳಿಗೆ ಬಿಡುತ್ತಿದ್ದಾರೆ. ಮಹಾನಗರಪಾಲಿಕೆಯ ನೀರು ಕೂಡಾ ಇದೇ ರೀತಿ ಆಗುತ್ತಿದೆ. ಇದನ್ನು ಮನಪಾ ಆದಾಯ ಮೂಲವಾಗಿ ಬಳಸಿಕೊಂಡು ಪಾರ್ಕ್, ಕೈಗಾರಿಕೆ, ಕಟ್ಟಡ ಕಾಮಗಾರಿಗೆ ನೀಡಲು ಅವಕಾಶವಿದೆ. ಆದರೆ ಅದಕ್ಕೊಂದು ಯೋಜನೆ ರೂಪಿಸಬೇಕಾಗಿದೆ ಎಂದು ಶಾಸಕರು ಹೇಳಿದರು.

ನೀರು ಸಮಸ್ಯೆಗೂ ಪರಿಹಾರ : ಮಂಗಳೂರಿನಲ್ಲಿ ಬೇಸಿಗೆ ಬಂದಾಗ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದ್ದು, ಒಂದು ವೇಳೆ ಕೊಳಚೆ ನೀರು ಶುದ್ಧಿಕರಣಕ್ಕೆ ಒತ್ತು ನೀಡಿ ಕುಡಿಯಲು ಹೊರತುಪಡಿಸಿದ ಕಾರ್ಯಕ್ಕೆ ಈ ನೀರು ಬಳಕೆ ಮಾಡಿದರೆ ಶೇ.30ರಷ್ಟು ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಆದರೆ ಇದಕ್ಕೆ ಬಳಕೆ ಮಾಡುವ ಯಂತ್ರಗಳು, ನೀರಿನ ಶುದ್ಧತೆ ಬಗ್ಗೆ ಹೆಚ್ಚಿನ ಎಚ್ಚರವಹಿಸಬೇಕಾಗಿದೆ. ಪ್ರಾರಂಭಿಕವಾಗಿ ಸಣ್ಣ ಮಟ್ಟದಲ್ಲಿ ಆರಂಭಿಸಿ ಇದು ಯಶಸ್ವಿಯಾದಾಗ ದೊಡ್ಡ ಮಟ್ಟಕ್ಕೆ ವಿಸ್ತರಣೆ ಮಾಡಲು ಸುಲಭವಾಗಲಿದೆ ಎಂದು ಅವರು ಹೇಳಿದರು.

ಶಾಸಕರ ಅಭಿಪ್ರಾಯಕ್ಕೆ ಮನಪಾ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.

Related posts

ಗೋವಾ ಮೀನುಗಾರಿಕೆ ಸಚಿವರಾದ ಶ್ರೀ ನೀಲಕಂಠ ಹಲರ್ನ್ಕರ್‌ರವರನ್ನು ಭೇಟಿ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದ ಮಲ್ಪೆ ಮೀನುಗಾರ ಸಂಘದ ನಿಯೋಗ

ಡಾ| ಸಬೀಹ ಭೂಮಿಗೌಡ ಸಹಿತ ಐವರಿಗೆ ದತ್ತಿ ಪ್ರಶಸ್ತಿ

ಎಂಜಿಎಂ ಕಾಲೇಜು ಅಮೃತ ಮಹೋತ್ಸವ ವಸ್ತುಪ್ರದರ್ಶನ ಉದ್ಘಾಟನೆ