ಅಪಘಾತದಲ್ಲಿ ಮೃತಪಟ್ಟ ವಾಸುದೇವ ಅವರ ಮನೆಗೆ ಜಯಪ್ರಕಾಶ್ ಹೆಗ್ಡೆ ಭೇಟಿ

ಕೋಟ : ಕೋಟ ಸರ್ಕಲ್‌ನಲ್ಲಿ ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟ ವಾಸುದೇವ ಅವರ ಮನೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಅವರು ರಾಷ್ಟ್ರೀಯ ಹೆದ್ದಾರಿ 66‌ರ ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ ಈ ಸರ್ಕಲ್‌ಗಳಲ್ಲಿ ಹೆಚ್ಚುತ್ತಿರುವ ಅಪಘಾತದಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ನಡೆಸಿದ್ದು, ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ, ಇಕ್ಕಟ್ಟಾದ ಸರ್ವಿಸ್ ರಸ್ತೆ, ಮಣ್ಣು, ಕಸ ತುಂಬಿದ ಹೆದ್ದಾರಿ, ರಾತ್ರಿ ವೇಳೆ ಬೆಳಗದ ದಾರಿ ದೀಪ, ರಸ್ತೆ ಸುರಕ್ಷಾ ನಿಯಮ ಪಾಲಿಸದೇ ನುಗ್ಗುವ ಪಾದಚಾರಿಗಳು ಮೊದಲಾದ ಹಲವು ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗಿ ಅಮಾಯಕರನ್ನು ಬಲಿಪಡೆಯುತ್ತಿವೆ ಎಂದು ಜಯಪ್ರಕಾಶ್ ಹೆಗ್ಡೆಯವರ ಗಮನಕ್ಕೆ ತಂದರು.

ಈ ಎಲ್ಲಾ ಸಮಸ್ಯೆಗಳ ಕಡೆ ಗಮನಹರಿಸಿ, ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಜಯಪ್ರಕಾಶ್ ಹೆಗ್ಡೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗೋಪಾಲ್ ಬಂಗೇರ, ವಿನಯ ಕಬ್ಯಾಡಿ, ದಿನೇಶ್ ಗಾಣಿಗ, ನಾಗೇಂದ್ರ ಪುತ್ರನ್ ಉಪಸ್ಥಿತರಿದ್ದರು.

Related posts

ಮಲಗಿದಲ್ಲೇ ವ್ಯಕ್ತಿ ಮೃತ್ಯು

ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ – ತಪ್ಪಿದ ಭಾರಿ ದುರಂತ

ಹಬ್ಬದ ಋತುವಿನ ಸ್ವಾಗತ: ವಾಗ್ಶದಲ್ಲಿ ಕ್ರಿಸ್ಮಸ್ ಕೇಕ್ ಗಾಗಿ ಹಣ್ಣಿನ ಮಿಶ್ರಣ ಸಮಾರಂಭ